Wednesday 2 January 2019

ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ!

ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ  ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ!

ಡಾ||ರಾಜ್ ರಂತಹ ಹಿರಿಯರಿದ್ದಾಗ ಇಡೀ ಭಾರತೀಯ ಚಿತ್ರರಂಗದ ಚಿತ್ತ ಕನ್ನಡ ಚಿತ್ರರಂಗದ ಕಡೆಯಿದ್ದಿತು!

ನಂತರದ ತಲೆಮಾರುಗಳು ತಾವಾಯಿತು ತಮ್ಮ ರಿಮೇಕ್ ಚಿತ್ರಗಳಾಯಿತು ಎಂದು ತಾವು ರಾಡಿಯಲ್ಲಿ ಬಿದ್ದು ತಾವು ಒದ್ದಾಡಿದ್ದು ಅಲ್ಲದೇ, ಚಿತ್ರರಂಗವನ್ನೂ ರಾಡಿಯಲ್ಲಿ ಕೆಡವಿ, ಕನ್ನಡ ಚಿತ್ರರಂಗಕ್ಕೆ ಅಂತು ಇಂತು ಒಂದು ಗತಿ ಕಾಣಿಸಿದ್ದರು!



ಇತ್ತೀಚಿನ ತಲೆಮಾರಿನ ಚಿತ್ರರಂಗದ ಹುಡುಗರು ಕಷ್ಟ ಪಟ್ಟು ಕನ್ನಡ ಚಿತ್ರರಂಗಕ್ಕೆ ಅದರ ಗತಕಾಲವೈಭವವನ್ನು ಮರಳಿ ತರೋ ಪ್ರಯತ್ನ ಮಾಡಿದರು! ಆದರೆ ಈ ಮುಂಚಿನ ತಲೆಮಾರಿನವರ ಕೆಲಸದಿಂದಾಗ   ಅಂಟಿದ್ದ ರಾಡಿ ಎಷ್ಟೇ ತಿಕ್ಕಿದ್ದರೂ ಹೋಗಿದ್ದಿಲ್ಲ ಆಗ ಬಂದದ್ದೇ ಕೆಜಿಎಪ್ !
 


ಈಗ ಇಡೀಯ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ಮುಖ ಮಾಡಿದೆ. ಆದರೆ ಕೆಜಿಎಫ್ ನಶೆಯಲ್ಲೆ ಕನ್ನಡ ಚಿತ್ರರಂಗ ಕುಳಿತು ಕೊಳ್ಳೊದು ಬಿಟ್ಟು ಅಂತಹ ಯಶಸ್ಸನ್ನು ಪ್ರತಿ ಚಿತ್ರಗಳಲ್ಲಿ ಯಶಸ್ಸು ಸಾಧಿಸುವಂತ ಪ್ರಯತ್ನ ಮಾಡಬೇಕಿದೆ. ಅದರ ಹೊರತು ಚಿತ್ರರಂಗಕ್ಕೆ ರಾಡಿ ಹೋಗಿ ಧೂಳು ಹಿಡಿಯುತ್ತೆ
ಕೃಪೆ :- ಷಡ್ಯಂತ್ರಿ ಶಕುನಿ

Monday 31 December 2018

ಮತ್ತೆ ನಡೆದ 2017ರ ದುರ್ವರ್ತನೆ; ಎಂಜಿ ರಸ್ತೆಯಲ್ಲಿ ಯುವಕರಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಮತ್ತೆ ನಡೆದ 2017ರ ದುರ್ವರ್ತನೆ; ಎಂಜಿ ರಸ್ತೆಯಲ್ಲಿ ಯುವಕರಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಬೈಕ್ ನಲ್ಲಿ ಬಿಹಾರ ದಂಪತಿ ಹೋಗುತ್ತಿದ್ದಾಗ ಮೂವರು ಯುವಕರಿಂದ ವಿವಾಹಿತ ಮಹಿಳೆಗೆ ಲೈಂಗಿಕ ಕಿರುಕುಳ
New Year eve; After 2017 Nightmare, Voyeur molests a women at MG Road 
ಸಂಗ್ರಹ ಚಿತ್ರ
ಬೆಂಗಳೂರು: 2017ರಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ನೆನಪಿಸುವ ಮತ್ತೊಂದು ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದ್ದು, ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ದಂಪತಿಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ಜಯ ನಗರದಲ್ಲಿ ವಾಸವಿರುವ ಬಿಹಾರ ಮೂಲದ ದಂಪತಿಗಳ ಮೇಲೆ ದುಷ್ಕರ್ಮಿಗಳ ದಾಳಿ ಮಾಡಿದ್ದು, ದಂಪತಿಗಳಿಂದ ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡಿದ್ದಾರೆ. ಅಲ್ಲದೆ ಪತಿಗೆ ಥಳಿಸಿ ಆತನ ಪತ್ನಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ಎಂಜಿ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದ ಹೊಸ ವರ್ಷಾಚರಣೆ ಮುಗಿಸಿಕೊಂಡು ರಾತ್ರಿ ಸುಮಾರು 1 ಗಂಟೆಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ದಂಪತಿಗಳನ್ನು ರಿಚ್ ಮಂಡ್ ವೃತ್ತದಲ್ಲಿ ಬೈಕ್ ಅನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಗೆ ಥಳಿಸಿ ಆತನಿಂದ ಪರ್ಸ್ ಮತ್ತು ಮೊಬೈಲ್ ಫೋನ್ ಕಿತ್ತುಕೊಂಡಿದ್ದಾರೆ. ಅಲ್ಲದೆ ಮಹಿಳೆಯ ಹಿಂಭಾಗವನ್ನು ಅಸಭ್ಯಮುಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ತೆರಳುತ್ತಿದ್ದ ವೇಳೆ ಪತಿ ಪೊಲೀಸರನ್ನು ಕರೆದು ವಿಚಾರ ತಿಳಿಸಿದ್ದಾರೆ.
ಪೊಲೀಸರ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದ್ದು, ಈ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಘಟನೆ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಂಧಿತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಪರಾರಿಯಾಗಿರುವ ಮಿಕ್ಕವರಿಗಾಗಿ ಶೋಧ ನಡೆಸಿದ್ದಾರೆ.

Wednesday 26 December 2018

ವಿಮಾನ ನಿಲ್ದಾಣಗಳಲ್ಲಿ ಪ್ರ‍ಾದೇಶಿಕ ಭಾಷೆಯಲ್ಲಿಯೇ ಪ್ರಕಟಣೆ

ನವದೆಹಲಿ: ಸಾರ್ವಜನಿಕ ಪ್ರಕಟಣೆಗಳನ್ನು ಮೊದಲು ಪ್ರಾದೇಶಿಕ ಭಾಷಣೆಗಳಲ್ಲಿ ಪ್ರಕಟಿಸಿ. ನಂತರ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪ್ರಕಟಿಸುವಂತೆ ಎಲ್ಲಾ ವಿಮಾನ ನಿಲ್ದಾಣಗಳಿಗೆ ಕೇಂದ್ರ ಸರ್ಕಾರ ಬುಧವಾರ ನಿರ್ದೇಶನ ನೀಡಿದೆ.

ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರ ಸೂಚನೆಯಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಈ ಆದೇಶ ಹೊರಡಿಸಿದ್ದು, ಮೊದಲು ಪ್ರಾದೇಶಿಕ ಭಾಷಣೆಗೆ ಮನ್ನಣೆ ನೀಡುವಂತೆ ಸೂಚಿಸಲಾಗಿದೆ.
ಈ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕರಿಗೂ ಸೂಚನೆ ನೀಡಿದ್ದು, ಮೊದಲು ಪ್ರಾದೇಶಿಕ ಭಾಷೆಯಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸುವಂತೆ ನಿರ್ದೇಶಿಸಿದೆ.
2016ರಲ್ಲೇ ಭಾರತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಂಬಂಧಿಸಿದ ಘೋಷಣೆಗಳು ಪ್ರಾದೇಶಿಕ ಭಾಷೆಯಲ್ಲಿ ಕೂಡ ಇರಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈಗ ಪ್ರಾದೇಶಿಕ ಭಾಷೆ ಮೊದಲು ಬಳಸಬೇಕು ಎಂದು ಹೇಳಿದೆ.

ನಾತಿಚರಾಮಿ ಚಿತ್ರ ಇದೇ 28 ಕ್ಕೆ ಚಿತ್ರಮಂದಿರಗಳಲ್ಲಿ

ರಾಷ್ಟ್ರಪ್ರಶಸ್ತಿ ವಿಜೇತ ಮಂಸೋರೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವೂ ಇದೇ ವರ್ಷದ ಕೊನೆಯ ವಾರ ಡಿಸೆಂಬರ್ 28ರಂದು ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ.
ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದೂ ನಗರದ ಒತ್ತಡ ಬದುಕಿನ ನಡುವೆ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟಗಳನ್ನು ಸೂಕ್ಷ್ಮವಾಗಿ ಕಥೆಯ ರೂಪದಲ್ಲಿ ತರುತ್ತಿದ್ದಾರೆ ನಿರ್ದೇಶಕ ಮಂಸೋರೆಯವರು.

ನಾತಿಚರಾಮಿ ಎಂದರೆ ವಿವಾಹದ ಸಂದರ್ಭದಲ್ಲಿ ಧರ್ಮೇಚ, ಅಥೇಚ, ಕಾಮೇಚ ನಾತಿಚರಾಮಿ’ ಎನ್ನುವ ಸಾಲಿನ ಪದವನ್ನು ಶೀರ್ಷಿಕೆಗೆ ಸೆಲೆಕ್ಟ್ ಮಾಡಿಕೊಂಡಿದ್ದಾರಂತೆ.
ನಟ ಸಂಚಾರಿ ವಿಜಯ್, ನಟಿ ಶ್ರುತಿ ಹರಿಹರನ್, ಸಂಪತ್‌ಕುಮಾರ್, ವಿಕಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಉಳಿದಂತೆ ನುರಿತ ಕಲಾವಿದರ ದಂಡೇ ಸಿನಿಮಾದಲ್ಲಿ ಅಡಗಿದೆ.

ಜಗನ್ಮೋಹನ ರೆಡ್ಡಿ ಹಾಗೂ ಶಿವಕುಮಾರ್ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಂಧ್ಯಾ ರಾಣಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೂಘಿ, ಬಿಂದು ಮಾಲಿನಿಯರವರ ಸಂಗೀತ ಸಂಯೋಜನೆ ಇದೆ. ಒಟ್ಟಾರೆಯಾಗಿ ಹಲವಾರು ಕುತೂಹಲತೆ ವಿಶೆಷತೆಗಳನ್ನು ಒಳಗೊಂಡಿರುವ ಇಂದಿನ ಯುಗದ ಮಹಿಳೆಯರಿಗೆ ಹತ್ತಿರವಾಗುವ ಸಿನಿಮಾ ಇದಾಗಲಿದೆ.

ಒನ್ ವೇಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ತಡೆದು ಹಿಂದಕ್ಕೆ ಕಳುಹಿಸಿದ ಬೈಕ್ ಸವಾರ, ವಿಡಿಯೋ ವೈರಲ್!

ಒನ್ ವೇಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ತಡೆದು ಹಿಂದಕ್ಕೆ ಕಳುಹಿಸಿದ ಬೈಕ್ ಸವಾರ, ವಿಡಿಯೋ ವೈರಲ್!

ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ
ಸಂಚಾರಿ ನಿಯಮಗಳನ್ನು ಕೇವಲ ಸಾರ್ವಜನಿಕರು ಪಾಲಿಸುವುದಲ್ಲ. ಸರ್ಕಾರಿ ಸಂಸ್ಥೆಗಳು ಪಾಲಿಸಬೇಕು. ಹೀಗೆ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಒನ್ ವೇಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ಅನ್ನು ತಡೆದು ಬೈಕ್ ಸವಾರನೊಬ್ಬ ಹಿಂದಕ್ಕೆ ಕಳುಹಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ನವೆಂಬರ್ 30ರಂದು ಈ ಘಟನೆ ನಡೆದಿದ್ದು ಸದ್ಯ ವಿಡಿಯೋ ವೈರಲ್ ಆದ ಬಳಿಕ ಸುದ್ದಿ ಮುನ್ನಲೆಗೆ ಬಂದಿದೆ. ಯಶವಂತಪುರದಿಂದ ಬನಶಂಕರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್ ಒನ್ ವೇಯಲ್ಲಿ ಬರುತ್ತಿದ್ದುದ್ದನ್ನು ಕಂಡ ಬೈಕ್ ಸವಾರ ಬಸ್ ಅನ್ನು ತಡೆದಿದ್ದಾನೆ. ನಂತರ ಬಸ್ ನ ನಿರ್ವಾಹಕ ಬಂದು ಜಾಗ ಬಿಡುವಂತೆ ಕೇಳಿದ್ದಾನೆ. ಆದರೆ ಸವಾರ ನೀವು ರಾಂಕ್ ರೂಟ್ ನಲ್ಲಿ ಬರುತ್ತಿದ್ದೀರಾ ನೀವೆ ಹಿಂದಕ್ಕೆ ಹೋಗಿ ಎಂದು ಹೇಳಿದ್ದಾನೆ. 
ಇನ್ನು ಬಸ್ ಒನ್ ವೇಯಲ್ಲಿ ಹೋಗುತ್ತಿದ್ದುದ್ದನ್ನು ಕಂಡ ಕೆಲ ಬೈಕ್ ಹಾಗೂ ಕಾರುಗಳು ಸಹ ಬಸ್ ಹಿಂದೆ ಬರುತ್ತಿದ್ದವು. ಇವರೆಲ್ಲರನ್ನು ಹಿಂದಕ್ಕೆ ಕಳುಹಿಸಿ ನಂತರ ಬಸ್ ಅನ್ನು ಹಿಂದಕ್ಕೆ ವಾಪಸ್ ಕಳುಹಿಸುವ ಮೂಲಕ ಬೈಕ್ ಸವಾರ ಬಿಎಂಟಿಸಿ ಬಸ್ ಚಾಲಕನಿಗೆ ತಕ್ಕ ಪಾಠ ಕಲಿಸಿದ್ದಾನೆ.
ಸಂಬಂಧಿಸಿದ ವಿಡಿಯೋ

ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ಗಳಿಸಿದ ಕೆಜಿಎಫ್!

ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ಗಳಿಸಿದ ಕೆಜಿಎಫ್!

ಹಿಂದಿಯಲ್ಲಿ ಜೀರೋ ಹಿಂದಿಕ್ಕಿ ಮುಂದುವರೆದ ಕೆಜಿಎಫ್ ನಾಗಾಲೋಟ
Box Office: Yash Starrer KGF Becomes Highest Grossing Kannada Film, Crosses Rs 100 Crore Mark
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಾದ್ಯಂತ ತನ್ನ ಬಾಕ್ಸ್ ಆಫೀಸ್ ಗಳಿಕೆ ನಾಗಾಲೋಟ ಮುಂದುವರೆಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಇದೀಗ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಚಿತ್ರದ ಗಳಿಕೆ 100 ಕೋಟಿ ರೂ ದಾಟಿದೆ.
ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಬಾಕ್ಸ್ ಆಫಿಸ್ ಗಳಿಕೆಯ ಮಾಹಿತಿಯನ್ನ ಟ್ವೀಟ್ ಮಾಡಿದ್ದು, ಐದನೇ ದಿನದ ವೇಳೆಗೆ ಕೆಜಿಎಫ್ ಹಿಂದಿ ಅವತರಣಿಕೆಯ ಚಿತ್ರ 16.45 ಕೋಟಿ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ ಹಿಂದಿ ಭಾಷೆಯ ಕೆಜಿಎಫ್ ಚಿತ್ರದ 5ನೇ ದಿನದ ಕಲೆಕ್ಷನ್‌ 4.35 ಕೋಟಿ ರೂಪಾಯಿ ಎಂದು ತರಣ್ ಆದರ್ಶ ಬರೆದಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಹಿಂದಿ ಅವತರಣಿಕೆಯ ಕೆಜಿಎಫ್ ಮೊದಲ ದಿನ ಅಂದ್ರೆ ಶುಕ್ರವಾರ ರೂ 2.10 ಕೋಟಿ, ಶನಿವಾರ ರೂ 3 ಕೋಟಿ,  ಭಾನುವಾರ ರೂ4.10 ಕೋಟಿ, ಸೋಮವಾರ ರೂ2.90 ಕೋಟಿ ಹಾಗೂ ಮಂಗಳವಾರ ಅಂದ್ರೆ ನಿನ್ನೆಗೆ ರೂ4.35 ಕೋಟಿ ಗಳಿಸಿದ್ದು ಒಟ್ಟು, ರೂ 16.45 ಕೋಟಿ ರೂಪಾಯಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. 
ಇನ್ನು ಸಿನಿ ಟ್ರೇಡ್​ ಅನಾಲಿಸ್ಟ್​ ಗಳು ಹೇಳುವ ಪ್ರಕಾರ ನಿನ್ನೆಯೇ ಕೆಜಿಎಫ್​ ಒಟ್ಟು ಕಲೆಕ್ಷನ್ ರೂ100 ಕೋಟಿ ದಾಟಿದ್ದು, ಕ್ರಿಸ್ ಮಸ್ ರಜಾದಿನಗಳ ಸಂಪೂರ್ಣ ಬೆಂಬಲವನ್ನು ಕೆಜಿಎಫ್ ಪಡೆದುಕೊಂಡಿದೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿನ ಸ್ಕ್ರೀನ್ ಗಳ ಸಂಖ್ಯೆ ಕೂಡ ಕೆಜಿಎಫ್ ಚಿತ್ರದ ಗಳಿಕೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎನ್ನಲಾಗಿದೆ. 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್ ಮಸ್ ರಜೆ ಇರುವ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ  ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. 
ಆ ಮೂಲಕ ವಿಶ್ವಾದ್ಯಂತ 100 ಕೋಟಿ ರೂ ಗಳಿಸಿದ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿದೆ.
ರಾಕಿ ಭಾಯ್ ಇಲ್ಲಿಯವರೆಗೆ ಗಳಿಸಿದ್ದೆಷ್ಟು?
-‘ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ.
-ಎರಡನೇ ದಿನದ ಕೆಜಿಎಫ್ ಟೋಟಲ್ ಕಲೆಕ್ಷನ್ ಸುಮಾರು 40 ಕೋಟಿ ರೂ.
-ಮೂರನೇ ದಿನಕ್ಕೆ ‘ಕೆಜಿಎಫ್’ ಒಟ್ಟಾರೆ ಕಲೆಕ್ಷನ್ 58 ಕೋಟಿ ರೂ.
-ಕೆಜಿಎಫ್ ಚಿತ್ರ ನಾಲ್ಕನೇ ದಿನಕ್ಕೆ ದಾಟಿತ್ತು 77 ಕೋಟಿ ರೂ.
-ಐದನೇ ದಿನ ನೂರು ಕೋಟಿ ರೂ. ಗಡಿ ದಾಟಿದ ಕೆಜಿಎಫ್
ಇನ್ನು ಬಾಕ್ಸ್ ಆಫೀಸ್ ಗಳಿಕೆ ಕುರಿತು ಚಿತ್ರತಂಡದಿಂದ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

Thursday 22 November 2018

ಡಬ್ಬಿಂಗ್ ( ಇದು ಕನ್ನಡಪರ )

ಕನ್ನಡಿಗರಾದ ನಾವು ಕನ್ನಡದಲ್ಲೇ ಮನೋರಂಜನೆ ಪಡೆಯಬೇಕೇ ವಿನಃ ಪರಭಾಷೆಯಿಂದ ಅಲ್ಲ 
ಹಾಗಾಗಿ ಕನ್ನಡಕ್ಕೆ ಡಬ್ಬಿಂಗ್ ಬೇಕೇ ಬೇಕು 
ಬನವಾಸಿ ಬಳಗ ಮುಂಚಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ 
ಇದೇ ಭಾನುವಾರ ಕೂಡಾ ಚಿತ್ರರಂಗಕ್ಕೆ ಬಿಸಿ ಮುಟ್ಟಿಸಲೆಂದೇ ಹೋರಾಟ ಮಾಡಲಾಗುತ್ತಿದೆ 
ದಯವಿಟ್ಟು ಕನ್ನಡಿಗರು ನಟರ ಅಭಿಮಾನದಿಂದ ಡಬ್ಬಿಂಗ್  ಬೇಡ  ಅಂತ ಹೇಳೋದು ಬಿಟ್ಟು ಡಬ್ಬಿಂಗ್ ಕನ್ನಡಪರ ಎಂದು ಅರಿತು ಬೆಂಬಲ ಕೊಡಿ

ಇದು ಪ್ರತಿಯೊಬ್ಬ ಕನ್ನಡಿಗರ ಕೆಲಸ ಹಾಗೆ ಇದು ನಮ್ಮ ಹಕ್ಕು 


ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ!

ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ  ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ! ಡಾ||ರಾಜ್ ರಂತಹ ಹಿರಿಯರಿದ್ದಾಗ ಇಡೀ ಭಾರತೀಯ ಚಿತ್ರರಂಗದ ಚಿತ್ತ ಕನ್ನ...