Wednesday 26 December 2018

ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ಗಳಿಸಿದ ಕೆಜಿಎಫ್!

ಬಿಡುಗಡೆಯಾದ ಐದೇ ದಿನಕ್ಕೆ 100 ಕೋಟಿ ಗಳಿಸಿದ ಕೆಜಿಎಫ್!

ಹಿಂದಿಯಲ್ಲಿ ಜೀರೋ ಹಿಂದಿಕ್ಕಿ ಮುಂದುವರೆದ ಕೆಜಿಎಫ್ ನಾಗಾಲೋಟ
Box Office: Yash Starrer KGF Becomes Highest Grossing Kannada Film, Crosses Rs 100 Crore Mark
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಾದ್ಯಂತ ತನ್ನ ಬಾಕ್ಸ್ ಆಫೀಸ್ ಗಳಿಕೆ ನಾಗಾಲೋಟ ಮುಂದುವರೆಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಇದೀಗ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪನೆ ಮಾಡಿದ್ದು, ಚಿತ್ರದ ಗಳಿಕೆ 100 ಕೋಟಿ ರೂ ದಾಟಿದೆ.
ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಬಾಕ್ಸ್ ಆಫಿಸ್ ಗಳಿಕೆಯ ಮಾಹಿತಿಯನ್ನ ಟ್ವೀಟ್ ಮಾಡಿದ್ದು, ಐದನೇ ದಿನದ ವೇಳೆಗೆ ಕೆಜಿಎಫ್ ಹಿಂದಿ ಅವತರಣಿಕೆಯ ಚಿತ್ರ 16.45 ಕೋಟಿ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ ಹಿಂದಿ ಭಾಷೆಯ ಕೆಜಿಎಫ್ ಚಿತ್ರದ 5ನೇ ದಿನದ ಕಲೆಕ್ಷನ್‌ 4.35 ಕೋಟಿ ರೂಪಾಯಿ ಎಂದು ತರಣ್ ಆದರ್ಶ ಬರೆದಿದ್ದಾರೆ. ಅವರು ನೀಡಿದ ಮಾಹಿತಿಯಂತೆ ಹಿಂದಿ ಅವತರಣಿಕೆಯ ಕೆಜಿಎಫ್ ಮೊದಲ ದಿನ ಅಂದ್ರೆ ಶುಕ್ರವಾರ ರೂ 2.10 ಕೋಟಿ, ಶನಿವಾರ ರೂ 3 ಕೋಟಿ,  ಭಾನುವಾರ ರೂ4.10 ಕೋಟಿ, ಸೋಮವಾರ ರೂ2.90 ಕೋಟಿ ಹಾಗೂ ಮಂಗಳವಾರ ಅಂದ್ರೆ ನಿನ್ನೆಗೆ ರೂ4.35 ಕೋಟಿ ಗಳಿಸಿದ್ದು ಒಟ್ಟು, ರೂ 16.45 ಕೋಟಿ ರೂಪಾಯಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. 
ಇನ್ನು ಸಿನಿ ಟ್ರೇಡ್​ ಅನಾಲಿಸ್ಟ್​ ಗಳು ಹೇಳುವ ಪ್ರಕಾರ ನಿನ್ನೆಯೇ ಕೆಜಿಎಫ್​ ಒಟ್ಟು ಕಲೆಕ್ಷನ್ ರೂ100 ಕೋಟಿ ದಾಟಿದ್ದು, ಕ್ರಿಸ್ ಮಸ್ ರಜಾದಿನಗಳ ಸಂಪೂರ್ಣ ಬೆಂಬಲವನ್ನು ಕೆಜಿಎಫ್ ಪಡೆದುಕೊಂಡಿದೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿನ ಸ್ಕ್ರೀನ್ ಗಳ ಸಂಖ್ಯೆ ಕೂಡ ಕೆಜಿಎಫ್ ಚಿತ್ರದ ಗಳಿಕೆಯಲ್ಲಿ ಮಹತ್ವದ ಕೊಡುಗೆ ನೀಡಿದೆ ಎನ್ನಲಾಗಿದೆ. 4 ದಿನಕ್ಕೆ 77 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ಸ್ಕ್ರೀನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವ ಜೊತೆಗೆ ಕ್ರಿಸ್ ಮಸ್ ರಜೆ ಇರುವ ಕಾರಣ ಭರ್ಜರಿ ಕಲೆಕ್ಷನ್ ಮಾಡಿದೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡುವ  ಮೂಲಕ ತನ್ನ ಹಿರಿಮೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. 
ಆ ಮೂಲಕ ವಿಶ್ವಾದ್ಯಂತ 100 ಕೋಟಿ ರೂ ಗಳಿಸಿದ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಕೆಜಿಎಫ್ ಪಾತ್ರವಾಗಿದೆ.
ರಾಕಿ ಭಾಯ್ ಇಲ್ಲಿಯವರೆಗೆ ಗಳಿಸಿದ್ದೆಷ್ಟು?
-‘ಕೆಜಿಎಫ್’ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 23 ಕೋಟಿ ರೂ.
-ಎರಡನೇ ದಿನದ ಕೆಜಿಎಫ್ ಟೋಟಲ್ ಕಲೆಕ್ಷನ್ ಸುಮಾರು 40 ಕೋಟಿ ರೂ.
-ಮೂರನೇ ದಿನಕ್ಕೆ ‘ಕೆಜಿಎಫ್’ ಒಟ್ಟಾರೆ ಕಲೆಕ್ಷನ್ 58 ಕೋಟಿ ರೂ.
-ಕೆಜಿಎಫ್ ಚಿತ್ರ ನಾಲ್ಕನೇ ದಿನಕ್ಕೆ ದಾಟಿತ್ತು 77 ಕೋಟಿ ರೂ.
-ಐದನೇ ದಿನ ನೂರು ಕೋಟಿ ರೂ. ಗಡಿ ದಾಟಿದ ಕೆಜಿಎಫ್
ಇನ್ನು ಬಾಕ್ಸ್ ಆಫೀಸ್ ಗಳಿಕೆ ಕುರಿತು ಚಿತ್ರತಂಡದಿಂದ ಈ ವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

No comments:

Post a Comment

ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ!

ಕೆಜಿಎಫ್ ಕನ್ನಡ ಚಿತ್ರರಂಗದ ಗತಕಾಲದ ವೈಭವವನ್ನು ಮರಳಿ  ತಂದಿದೆ ಅಂದರೆ ಅತಿಶಯೋಕ್ತಿ ಏನಿಲ್ಲ! ಡಾ||ರಾಜ್ ರಂತಹ ಹಿರಿಯರಿದ್ದಾಗ ಇಡೀ ಭಾರತೀಯ ಚಿತ್ರರಂಗದ ಚಿತ್ತ ಕನ್ನ...